VAG INDIA TRUST
Dream World School


 

ಕರ್ನಾಟಕ ರಾಜ್ಯೋತ್ಸವ ೨೦೨೧ -೨೦೨೨


          ನಮ್ಮ ಶಾಲೆಯಲ್ಲಿ ನವ್ಹಂಬರ್ ೧, ೨೦೨೧ ರ ಸೋಮವಾರದಂದು, ೬೬ ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ರಘುನಾಥ ಹೆಚ್, ಶಿಕ್ಷಕರು ಮತ್ತು ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಪರಿಮಳ ಸಿ.ಎಂ. ಅವರು ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ರಾಷ್ಟç ಧ್ವಜಾರೋಹಣವನ್ನು ನೆರವೇರಿಸಿದರು.  

        ನವ್ಹಂಬರ್ ೧ ರಂದು ರಾಜ್ಯೋತ್ಸವವನ್ನು ಆಚರಿಸುವುದರ ಜೊತೆಗೆ ಕನ್ನಡ ಭಾಷೆಯನ್ನು ಶುದ್ಧವಾಗಿ ಮಾತನಾಡುವ, ಬರೆಯುವುದರ ಮೂಲಕ ನಾವು ಗೌರವ ಮತ್ತು ಅಭಿಮಾನವನ್ನು ತೋರಿಸಿದಾಗ ರಾಜ್ಯೋತ್ಸವದ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ಮುಖ್ಯ ಅತಿಥಿಗಳು ತಮ್ಮ ಮನದಾಳದ ಮಾತನ್ನು ತಿಳಿಸುವುದರ ಜೊತೆಗೆ ‘ರಾಜ್ಯೋತ್ಸವದ ಶುಭೋದಯ ನಾಡಿನ ಜನತೆಗೆ ನವೋದಯ’ ಎನ್ನುವ ಹಾಡನ್ನು ಸುಮಧುರ ಕಂಠದಲ್ಲಿ ಹಾಡುವ ಮೂಲಕ ಕರ್ನಾಟಕದ ಇತಿಹಾಸ, ಕನ್ನಡಿಗರ ಉದಾರಗುಣ, ಹಿರಿಮೆ, ಗರಿಮೆಗಳನ್ನು ಮಕ್ಕಳಿಗೆ ಮನದಟ್ಟು ಮಾಡಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಸ್ವರಚಿತ ಕವನ ವಾಚನ ಮತ್ತು ಭಾಷಣ ಪ್ರಸ್ತುತ ಪಡಿಸಿದರು. ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕöÈತಿಯ ಹಿರಿಮೆಯನ್ನು ಸಾರುವಂತಹ ಹಾಡುಗಳನ್ನು ಹಾಡುವ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಮಾರಂಭದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಪಾಲಕ/ಪೋಷಕರು ಉಪಸ್ಥಿತರಿದ್ದರು.


 

Images